Thursday, January 14, 2010

ಫ್ರೆಂಡ್ ಶಿಪ್ ಜಿಹಾದ್

ಒಂದು ಆಶ್ಚರ್ಯಕರವಾದ ಸಂಗತಿ ನಿಮ್ಮ ಹತ್ತಿರ ಹಂಚಿಕೊಳ್ಳಲೇಬೇಕು. ಇದಕ್ಕೆ ಏನೆಂದು ಹೆಸರಿಡುವುದೋ ನನಗೆ ಗೊತ್ತಾಗುತ್ತಿಲ್ಲ, ಇತ್ತೀಚೆಗೆ ಬಂದ ಲವ್ ಜಿಹಾದ್ ಸಮಸ್ತ ಓದುಗರು ಕೇಳಿರಬಹುದು ಹಾಗು ತಲ್ಲಣಗೊಂಡಿರಬಹುದು . ಇದಕ್ಕೆ ಸಂಭಂದಿಸಿದ ಮತ್ತೊಂದು ಸಂಗತಿ ಎಂದರೆ ಫ್ರೆಂಡ್ ಶಿಪ್ ಜಿಹಾದ್ , ಸದ್ಯಕ್ಕೆ ಇದೆ ಸರಿಯಾದ ಪದ ಎಂದು ಅಂಬೋಣವೆ?.

ನಾನು ಕೆಲಸ ಮಾಡುತ್ತಿರುವುದು ವೈಟ್ ಫೀಲ್ಡ್ ಹತ್ತಿರವಿರುವ ಒಂದು ಖಾಸಗಿ ಕಂಪನಿಯೊಂದರಲ್ಲಿ. ಮನೆಗೆ ಕಂಪನಿಯ ಸಾರಿಗೆ ವ್ಯವಸ್ಥೆ ಇರುವುದರಿಂದ ನಮ್ಮ ವಿವಿಧ ಪ್ರಕ್ರಿಯೆಗಳಲ್ಲಿ ಕೆಲಸಮಾಡುವ ಕ್ಯಾಬ್ ಸಹೋದ್ಯೋಗಿಗಳು ಆಯಾ ಪ್ರದೇಶಕ್ಕಿರುವ ಗಾಡಿಯಲ್ಲಿಯೇ ಹೋಗಬೇಕು. ಹಾಗೆ ಹೊಸದಾಗಿ ಸೇರ್ಪಡೆಯಾದವರಲ್ಲಿ ಇಮಾಂ ಶೇಖ್ (ಹೆಸರು ಬದಲಾಯಿಸಲಾಗಿದೆ). ಮೊದ ಮೊದಲು ಸುಮ್ಮನಾಗಿದ್ದ ಅವರು ಕ್ರಮೇಣ ಮಾತಾಡಲು ಶುರುಮಾಡಿದರು, ಮುಂಬೈ ಇಂದ ಇಲ್ಲಿಗೆ ಬಂದು ಬೆಂಗಳೂರಿನಲ್ಲೇ ನೆಲೆಯೂರಿದ್ದಾರಂತೆ. ಮುಂಬೈಯಲ್ಲಿ ಖಾಸಗಿ ವ್ಯವಹಾರದಲ್ಲಿ ಕೈ ಸುಟ್ಟುಕೊಂಡು ಇಲ್ಲಿಗೆ ಬಂದು ನಮ್ಮ ಕಂಪನಿ ಗೆ ಸೇರಿಕೊಂಡರು.

ಹೀಗೆ ಒಂದು ದಿನ ಅವರ ಖಾಸಗಿ ವಿಷಯಗಳನ್ನು ಹೇಳುತ್ತಿರುವಾಗ ಅವರು ಬ್ರಾಹ್ಮಣ ಜಾತಿಯಿಂದ ಮುಸಲ್ಮಾನರಾಗಿ ಮತಾಂತರಗೊಂಡರಂತೆ, ಮುಂಚಿದ್ದ ಹೆಸರು ಸರ್ವೇಶ್ ತುಕಾರಾಂ (ಹೆಸರು ಬದಲಾಯಿಸಲಾಗಿದೆ) ಎಂದು ಹೇಳಿದರು. ನಮಲ್ಲಿದ್ದ ಸಹೋದ್ಯೋಗಿಗಳೆಲ್ಲರು ಆಶ್ಚರ್ಯ ಚಕಿತರಾಗಿ ಅವರನ್ನೇ ನೋಡುತ್ತಾ ಕೂತೆವು. ಅವರು ಮುಜುಗರ ಪಡದೆ ಒಂದೊಂದೇ ಪದರಗಳನ್ನು ಬಿಚ್ಚಲು ಹೊರಟರು.

ಹತ್ತು ವರುಷಗಳ ಹಿಂದೆ ಅವರ ಬಾಲ್ಯದ ದಿನಗಳಲ್ಲಿ ರಿಹಾನ್ ಎಂಬ ಅವರಷ್ಟೇ ವಯಸ್ಸಿನ ಮುಸಲ್ಮಾನ ಹುಡುಗ ಪರಿಚಯವಾಗಿ ಒಡನಾಟ ದಿನೇ ದಿನೇ ಹೆಚ್ಚಾಯಿತಂತೆ. ಖುದ್ದಾಗಿ ಇಮಾಂರನ್ನು ಮಸೀದಿಗೆ ಕರೆದುಕೊಂಡು ಹೋಗುತ್ತಿದ್ದರಂತೆ, ಖುರಾನ್ ಗ್ರಂಥದ ಬಗ್ಗೆ ದೀರ್ಘವಾಗಿ ಹೇಳುತ್ತಿದ್ದರಂತೆ. ಇದನ್ನೆಲ್ಲಾ ಕಂಡು ಇವರು ಮಾರುಹೋಗಿ ಹೆತ್ತವರಿಗೂ ತಿಳಿಸದೇ ಮತಾಂತರಗೊಂಡರಂತೆ. ಇತ್ತ ತಂದೆ ತಾಯಿ ಕುಪಿತಗೊಂಡು ಹಿಡಿ ಶಾಪ ಹಾಕಿ ಮನೆ ಇಂದ ಹೊರಹಾಕಿ ಆರು ತಿಂಗಳಿನಲ್ಲಿ ವಾಪಸು ಕರೆಸಿಕೊಂಡರಂತೆ, ಇಷ್ಟಾಗಿಯೂ ಮತಾಂತರಗೊಂಡಿರುವ ಜಾತಿಯಿಂದ ಬೇರ್ಪಡಿಸಿ ಕೊಳ್ಳಲ್ಲಿಲ್ಲವಂತೆ. ಅದರಲ್ಲಿಯೇ ಮುಂದುವರಿಯುತ್ತಿದ್ದಾರಂತೆ. ಮುಂದುವರಿಯುತ್ತಾರಂತೆ.

ಮೋಹಕ್ಕಾಗಿ ಮತಾಂತರಗೊಳ್ಳುವುದು ವಿವೇಕವೇ? ಎಂದು ಕೇಳಿದಾಗ ಬಂದ ಉತ್ತರ ಹೀಗೆ; ಅವರಲ್ಲಿರುವ ಒಗ್ಗಟ್ಟುತನ ಹಿಂದೂಗಳಲ್ಲಿಲ್ಲ ಎಂದು ತೇಲಿಸಿದರು. ಸರಿ ಇನ್ನು ಕೇಳುವುದು ಅಪ್ರಯೋಜಕವೆಂದು ತಿಳಿದು ಸುಮ್ಮನಾದೆ.

ಈಗಲೂ ನಾನಾ ಕಡೆ ಇಂತಹುದೇ ಘಟನೆಗಳು ನಡೆಯುತ್ತಿರಬಹುದು ಇಡೀ ಭಾರತದಲ್ಲಿ, ಆದರೆ ಕಾಣದ ಕೈಗಳು ಎಷ್ಟಿರಬಹುದು ಎಂದು ಊಹಿಸಲು ಅಸಾಧ್ಯ.

ನಮ್ಮಲ್ಲಿ ಒಗ್ಗಟ್ಟುತನವಿದ್ದರು ತೋರದೆ ಇರುವುದು ಅನೌಚಿತ್ಯವೇ ಸರಿ.

ಜಿಹಾದ್ ಅನ್ನೋ ಪಾಶಕ್ಕೆ ಕಡಿವಾಣ ಹಾಕುವುದು ನಮ್ಮ ಕೈಯಲ್ಲಿಯೇ ಇದೆ. ಹಿಂದೂ ಧರ್ಮವು ಮಲಿನ ಗೊಳ್ಳದಂತೆ ನೋಡಿಕೊಳ್ಳಬೇಕಾಗಿದೆ

0 Comments:

Post a Comment

Subscribe to Post Comments [Atom]

<< Home